Tuesday, September 11, 2012

ಹಸಿವಾಗದಾಗ


ಪ್ರತಿದಿನವು ಹೊರಗುಂಡು
ನಾಲಿಗೆಯು ರುಚಿ ತಪ್ಪಿ
ಸರಿಯಾದ ಕಾಲಕ್ಕೆ
ಹಸಿವಾಗದಿರಲು
ಫುಡ್ ಕೋರ್ಟಿನಲಿ ಕೂತು
ಫುಲ್ ಮೀಲ್ಸು ಮುಂದಿಟ್ಟು
ಬೇಜಾರಿನಲಿ ಒಮ್ಮೆ
ಲೊಚಗುಟ್ಟಿ ತಲೆ ಕೆರೆದು
ಹಣೆ ಸವರಿ ಎಡ ತಿರುಗಿ
ಕಣ್ಣೆತ್ತಿ ನೋಡಿದರೆ
ಹಸಿರು ಚೂಡಿಯ ತೊಟ್ಟ
ಸರಳ ಸುಂದರಿ ಅವಳು
ಕಣ್ಣಲ್ಲಿ ಕಣ್ಣಿಟ್ಟು
ತುಟಿಯಂಚಿನಲಿ ಹಾಗೇ
ನಗುವೊಂದನೆಸೆದರೆ...
...
ನನಗದೇ ಅಪಟೈಸರ್!!

8 comments:

  1. ಗೆಳಯ ವಿನಯನೇ ,
    ನನಗೆ ತಿಳಿಯಲಿಲ್ಲ , ನಿನಗಾಗದಿರುವುದು ಯಾವ ಹಸಿವೆಂದು...!!!
    ಮತ್ತು ನಿನಗಾದ ಆ ಅಪಟೈಸರ್ ಯಾವ ಹಸಿವೆಗೆಂದು ...!!!!!
    ಸಿನಿಗವನ

    ReplyDelete
    Replies
    1. ಲೇ ಸೀನ, ನಿನಗೆ ಅರ್ಥ ಆಗೊ ಕಾಲ ಮುಗಿದು ಹೋಯ್ತು ಸಿಸ್ಯಾ..

      Delete