Sunday, August 26, 2012

ವಿನಿಗವನ - ಭ್ರೂಣಹತ್ಯೆ

ಇದು ಎರಡು ಮೂರು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಬರೆದಿದ್ದ ನೆನಪು. ಈವತ್ತು ಬೆಳಿಗ್ಗೆ ಕಸ ಗುಡಿಸೋವಾಗ ಒಂದು ಚೀಟಿಯಲ್ಲಿ ಸಿಕ್ತು. ಬರೆದಿದ್ದನ್ನ ಬಿಸಾಕಬೇಡ  ಒಂದು ಕಡೆ ಜೋಪಾನವಾಗಿಡು  ಎಂದ ಆತ್ಮೀಯರೊಬ್ಬರ ಮಾತು ನೆನಪಾಗಿ ಹಾಳೆ ಮೇಲಿದ್ದದ್ದನ್ನು ಇಲ್ಲಿ ಹಾಕ್ತಾ ಇದ್ದೀನಿ.


ಆಫೀಸಿನಲ್ಲಿ ಒಂದು ದಿನ:
ಹುಡುಗ ನೋಡಿದ ಚೆಲುವೆಯೊಬ್ಬಳ
ಮೆಚ್ಚಿ ಕರೆದನು ಕಾಫಿಗೆ
ಏನೊ ಗುಂಗಲಿ ಒಲ್ಲೆನೆಂದಳು
ನಗುತ ತುಟಿಯಲೆ ಮೆಲ್ಲಗೆ

ಮರುದಿನ:
ಬಾಯಿ ತಪ್ಪಿ ನುಡಿದ ಮಾತಿಗೆ
ಹುಡುಗಿ ಮನಸು ನೊಂದಿತು
ಮತ್ತೆ ಕಾಫಿಗೆ ಕರೆಯಲವಳನು
ಹುಡುಗನ ಅಹಂ ತಡೆಯಿತು.

ಹೀಗೆ
ಒಂದು ಸುಂದರ ಪ್ರೇಮಕಾವ್ಯದ
ಭ್ರೂಣಹತ್ಯೆಯು ನಡೆಯಿತು.

2 comments: