*****SPOILER ALERT*****
ಇತ್ತೀಚಿಗೆ ಯಥೇಚ್ಛ ಸಂಖ್ಯೆಯಲ್ಲಿ ಕಿರುಚಿತ್ರಗಳು ಬರುತ್ತಿವೆ. ಇವುಗಳಲ್ಲಿ ಕೆಲವು, ಎರಡುವರೆ ಗಂಟೆ ಸಿನೆಮಾದಲ್ಲಿ ಹೇಳಲಾಗದ್ದನ್ನು ಕೆಲವೇ ನಿಮಿಷಗಳಲ್ಲಿ, ಅಚ್ಚುಕಟ್ಟಾಗಿ ಹೇಳಿ ನೆನಪಿನಲ್ಲುಳಿಯುತ್ತವೆ. ಈ ಚಿತ್ರವೂ ಹಾಗೆಯೆ.
ದ್ರೌಪದಿಯ ಪಾತ್ರವೇ ತಾನಾಗಿ ನಟಿಸುವ ಕಲಾವಿದೆಯೊಬ್ಬಳು ಈ ಕತೆಯಲ್ಲಿ ಶೋಷಿತೆ. ಸೋಮಾರಿ, ಕುಡುಕ ಗಂಡ. ಕಷ್ಟಕ್ಕೆ ನೆರವಾಗುವ ತಮ್ಮನಂತಹ ಗೆಳೆಯನ ಜೊತೆಗೇ ಸಂಬಂಧ ಕಲ್ಪಿಸಿ ಕುಟುಕುವಾಗಷ್ಟೆ ಅವ ಬಾಯ್ತೆರೆದು ಮಾತಾಡುವುದು. ದ್ರೌಪದಿಯ ಸ್ವಗತ ಹಾಗೂ ಕಲಾವಿದೆಯ ಸ್ವಂತ ಕತೆಗಳು ಜತೆಯಾಗಿ ಬೆಸೆದು ಕಿರುಚಿತ್ರವಾಗುತ್ತ ಸಾಗುತ್ತವೆ.
ಅಂತಃಪುರದಲ್ಲಿ ಕುಳಿತು ಆಳವಾದ ಯೋಚನಾ ಲಹರಿಯಲ್ಲಿ ಮುಳುಗುವ ದ್ರೌಪದಿ, ತನ್ನ ಜೀವನದ ಅನೇಕ ಘಟ್ಟಗಳಲ್ಲಿ ತನ್ನ ಸ್ವಾತಂತ್ರ ಯಾರ್ಯಾರದೋ ಕಾಲ ಕಸವಾದ ಘಟನೆಗಳ ವಿಮರ್ಶೆಗೆ ತೊಡಗುತ್ತಾಳೆ.

"ಚಿಕ್ಕ
ವಯಸ್ಸಿನಲ್ಲಿ
ಸೋದರ
ದೃಷ್ಟದ್ಯುಮ್ನನಿಗಿಲ್ಲದ
ಸಾವಿರ
ನಿರ್ಬಂಧಗಳ
ಹೆಣ್ಣೆಂಬ
ಕಾರಣಕ್ಕೆ
ತನ್ನ
ಮೇಲೆ
ಹೇರಿದ
ಅಮ್ಮ;
ಹೆಸರಿಗೆ
ಮಾತ್ರ 'ಸ್ವಯಂವರ'
ಏರ್ಪಡಿಸಿ,
ಗುರಿಗೆ
ಬಾಣ
ನೆಟ್ಟವ
ಮುದುಕನಾದರೂ
ಹಾರ
ಹಾಕಬೇಕೆಂದ
ಅಪ್ಪ;
ಕೆಲಸಕ್ಕೆ
ಬಾರದ
ಧರ್ಮಪಾಲನೆಗಾಗಿ
ಐದು
ಗಂಡಸರಿಗೆ
ತನ್ನ
ಹಂಚಿದ
ಅತ್ತೆ
ಕುಂತಿ.
ಇವರೆಲ್ಲ
ನನ್ನವರೇ
ಆಗಿ
ನನ್ನನ್ನು
ಶೋಷಣೆಗೆ ತಳ್ಳಿದವರು" -
ದ್ರೌಪದಿಗೆ
ತನ್ನವರ
ಮೇಲಿದ್ದ
ತಿರಸ್ಕಾರ
ಗೋಚರವಾಗುತ್ತದೆ.
ಮುಂದುವರಿದಂತೆ,
ತನ್ನನ್ನು
ವಸ್ತುವಂತೆ
ಮಾರಿಕೊಂಡ ಧರ್ಮರಾಯ(!)ನ ಭಂಡತನ,
ವಸ್ತ್ರಾಪಹರಣದ
ಸಮಯದಲ್ಲಿ
ನಿಸ್ಸಹಾಯಕರಾಗಿ
ಕೈ
ಕಟ್ಟಿ
ನಿಂತಿದ್ದ ಪಾಂಡವರ ಮತ್ತು ತುಟಿ ಪಿಟುಕ್ಕೆನದೆ ಕುಳಿತಿದ್ದ ಗಂಡಸರೆಲ್ಲರ
ಹೇಡಿತನಗಳ
ನೆನೆದು
ಕಿಡಿ
ಕಾರುತ್ತಾಳೆ. ಅಷ್ಟು
ಜನ
ಗಂಡಸರಿದ್ದೂ
ಒಂದು
ಹೆಣ್ಣಿನ
ಅತ್ಯಾಚಾರ
ತಡೆಯಲು
ಯಾರೂ ಮುಂದೆ
ಬಾರದ್ದನ್ನು
ನೆನೆದು
ಒಬ್ಬೊಬ್ಬರನ್ನೇ
ಹಳಿಯುತ್ತಾಳೆ.
ಆ
ಸಂದರ್ಭದಲ್ಲಿ,
ಕೃಷ್ಣ
ಬರದಿದ್ದರೆ
ನಗ್ನವಾಗುತ್ತಿದ್ದು
ನಾನಲ್ಲ,
ಅಲ್ಲಿ
ನೆರೆದಿದ್ದ
ಗಂಡಸರ
ಚಾರಿತ್ರ್ಯ. ಕೃಷ್ಣ ಬರಬಾರದಿತ್ತು ಎಂದು
ನಿಟ್ಟುಸಿರು
ಬಿಡುತ್ತಾಳೆ.
ಹೀಗೆ,
ಜೀವನದುದ್ದಕ್ಕೂ
ತನಗಾದ
ಶೋಷಣೆಗೆ
ಕಾರಣರಾದವರನ್ನು
ಒಬ್ಬೊಬ್ಬರಂತೆ
ದೂಷಿಸಿ
ಮುಗಿಸುವಷ್ಟರಲ್ಲಿ
ಒಂದು
ಅಶರೀರವಾಣಿ
ಪ್ರಶ್ನಿಸುತ್ತದೆ - "ಇಷ್ಟೆಲ್ಲ
ನಡೆಯುವಾಗ
ನೀನೇನು
ಮಾಡ್ತಿದ್ದೆ?".
ಸರಳ ಮತ್ತು ತರ್ಕಬದ್ಧವಾದ ಪ್ರಶ್ನೆ ಅಲ್ವಾ? ಅಶರೀರವಾಣಿಯನ್ನು
ಅವಳ
ಸುಪ್ತಮನಸ್ಸು
ಅಥವಾ ಅಂತರಾತ್ಮವೆಂದರ್ಥೈಸಬಹುದು.
ಆ ದನಿ, ದ್ರೌಪದಿಯ ಆಂತರ್ಯದ ಸಾವಿರ ಪ್ರಶ್ನೆಗಳ ನುಂಗಿ ನಗುವ ಮರುಪ್ರಶ್ನೆಯಾಗುತ್ತದೆ, ದ್ರೌಪದಿಯ ಅಸಹಾಯಕತೆಗೆ ಅದುವರೆಗು ಮರುಕ ತೋರುತ್ತಿದ್ದ ನೋಡುಗರ ಯೋಚನೆಗೆ ಬ್ರೇಕ್ ಹಾಕಿ
ತಿರುವು ನೀಡುತ್ತದೆ. ಹೆಣ್ಣಿನ ಶೋಷಣೆಯ ವಿರುದ್ಧ ಜಾಗೃತಿಯ ಕರೆಯಾಗಿ
ಪ್ರತಿಧ್ವನಿಸುತ್ತದೆ. ಕತೆಯೊಳಗಿನ ನಾಟಕದಲ್ಲಿ ಬರುವ ಈ ಸನ್ನಿವೇಶ, ಆ ಪಾತ್ರ ನಿರ್ವಹಿಸಿದ ಕಲಾವಿದೆಗೆ
ಸ್ಪೂರ್ತಿಯಾಗಿ ಹೇಗವಳ ರಕ್ಷಣೆ ಮಾಡಿತು? - ತಿಳಿಯಲು ಚಿತ್ರ ನೋಡಿ.
ನಿಮ್ಮ
ಮನೆಯಲ್ಲಿನ ಗಂಡುಮಕ್ಕಳನ್ನ ಜವಾಬ್ದಾರಿಯಿಂದ ಬೆಳೆಸಿ, ಆಗ ಪಕ್ಕದ ಮನೆ ಹೆಣ್ಣು ಮಕ್ಳು
ಕ್ಷೇಮವಾಗಿರ್ತಾರೆ ಎಂಬರ್ಥದ ಸಂದೇಶ ಕೊಟ್ರು, ಮೊನ್ನೆ ನಮ್ಮ ಪಿಯೆಮ್ಮು. ಇದಕ್ಕೂ ಮೊದಲೆ
ಆ ಸಂದೇಶ ಕೊಟ್ಟ ಚಿತ್ರ 'ಛದ್ಮವೇಷ'.
ಕ್ವಾಲಿಟಿ ಅಭಿನಯ, ಅಚ್ಚುಕಟ್ಟಾದ ನಿರ್ದೇಶನ ಮತ್ತು ಒಂದು ಅದ್ಭುತ ಸಂದೇಶ ಇರುವ ಈ
ಚಿತ್ರ ನೀವು ನೋಡಲೇಬೇಕು. ಸೌಂಡ್ ಕ್ವಾಲಿಟಿ ಕಡೆ ಸ್ವಲ್ಪ ಗಮನ ಹರಿಸಬೇಕಿತ್ತು.
ಕ್ಲೈಮಾಕ್ಸ್ ಅನ್ನು ಸ್ವಲ್ಪ ನಿಧಾನಕ್ಕೆ ತೋರಿಸಿ ಒಂದೇ ಸಾರಿ ನೋಡಿದದವರಿಗೆ
ಅರ್ಥವಾಗಿಸಬಹುದಿತ್ತು. ಹೀಗೊಂದೆರಡು ಸಣ್ಣ ಪುಟ್ಟ ಹುಳುಕುಗಳನ್ನ ಕ್ಷಮಿಸಿ,
ಒಂದು ಅಪರೂಪದ ಪ್ರಯತ್ನಕ್ಕೆ ಕೈ ಹಾಕಿ ಗುರಿ ಮುಟ್ಟಿದ 'ಛದ್ಮವೇಷ' ತಂಡಕ್ಕೆ ಒಂದು
ಶಹಭಾಸ್ ಹೇಳುವ.
Nice review. Is the movie available online?? Please share the link..
ReplyDelete