Monday, November 19, 2012

ವಿನಿಗವನ - ನಾನು

ಗೆಳೆಯರ ಇಡೀ ಗುಂಪಲ್ಲಿ
ಅತಿ ಹೆಚ್ಚು ಧೈರ್ಯವಂತ
ದೊಡ್ದ ವಾನರ ಸೈನ್ಯದೊಳಗೆ
ಮಹಾವೀರ ಹನುಮನ ಹಾಗೆ

ಅವಳ ಕಂಡಾಗ ಎದುರಲ್ಲಿ
ಎದೆಯೊಳಗೆ ಭೂಕಂಪ
ಒಮ್ಮೆ ಮತ್ತೇರಿದ ಮಂಗ
ಮತ್ತೊಮ್ಮೆ ಕರೆಂಟು ಹೊಡದ ಕಾಗೆ!

Monday, November 12, 2012

ದೀಪಾವಳಿ ಶುಭಾಶಯ


ಈ ವರುಷ ದೀವಳಿಗೆ
ಎಲ್ಲರಾ ಮನೆಗಳಲಿ
ಹೊಸ  ಬೆಳಕ ತರಲಿ

ಎಲ್ಲ ನೋವನು ಮರೆಸೊ
ನಗುವಿರಲಿ ಮನಗಳಲಿ
ಕತ್ತಲನು ಈ ಬೆಳಕು ಮನದಾಚೆ ಓಡಿಸಲಿ

ಮದ್ದು ಸದ್ದುಗಳು ಇಲ್ಲಿ ಇದ್ದರೂ ಮಿತವಿರಲಿ
ದೀಪಗಳ ಹಬ್ಬವಿದು
ಗದ್ದಲವೆ ನಗದಿರಲಿ

ನಮ್ಮ ಕಾಳಜಿ ಮೆಚ್ಚಿ ಭೂತಾಯ ಎದೆಯಿಂದ
ನಿತ್ಯ ಹೊಮ್ಮುತ್ತಿರಲಿ
ಮನವ ತಣಿಸುವಾ ಲಾಲಿ.