ಒಳ್ಳೆಯ ಹಾಡುಗಳೆ ಹಾಗೆ. ಕೆಲವು, ನಾವು ಕಂಡುಕೊಂಡೆವೆಂದುಕೊಂಡ ಬದುಕಿನ ಅರ್ಥಗಳನ್ನೆ ಪ್ರಶ್ನಿಸಿ, ನಮ್ಮ ಗಟ್ಟಿ ನಂಬಿಕೆಗಳನ್ನೆ ಬುಡಮೇಲು ಮಾಡುತ್ತವೆ. ಮತ್ತೆ ಕೆಲವು, ನಮ್ಮ ಚಿಕ್ಕ ಮೆದುಳಿಗೆಂದೂ ನಿಲುಕದಂತಿದ್ದ ಹೊಸ ಭಾವವೊಂದರ ಮುದವಾದ ಅನುಭವ ನೀಡಿ, ನಮ್ಮ ಭಾವಪ್ರಪಂಚದ ಪರಿಧಿಯನ್ನು ಹೆಚ್ಚಿಸಿ ಉಪಕಾರ ಮಾಡುತ್ತವೆ.
ಡಿಗ್ರಿ ಕಾಲೇಜಿನ ಮೆಟ್ಟಿಲು ಹತ್ತುವವರೆಗು ಇಂಗ್ಲಿಷ್ ಹಾಡುಗಳ ಗಂಧವಿರಲಿಲ್ಲ ನನಗೆ. ಇಂಗ್ಲಿಶ್ ಹಾಡುಗಳೆಂದರೆ ರಾಕ್ ಹಾಡುಗಳಷ್ಟೆ, ಸಾಹಿತ್ಯ ಸಮಾಧಿಯ ಮೇಲೆ ಡೋಲುಗಳ ಗದ್ದಲವದೆಂಬ ವಿಚಿತ್ರ ಗ್ರಹಿಕೆ ನನ್ನದಿತ್ತು. ಇಂಜಿನೀರಿಂಗ್ ಕಾಲೇಜಿನಲ್ಲಿ ಸಿಕ್ಕಿದ ಹೊಸ ಗೆಳೆಯರ ಪ್ರಭಾವದಿಂದ ಇಂಗ್ಲಿಷ್ ಹಾಡುಗಳ ಪರಿಚಯವಾಯ್ತು. ಮೊದಲ ಹಂತದಲ್ಲಿ ಕೇಳಿದ Linkin Park, backstreet boys, Beatles ನಂತಹ bandಗಳ ಹಾಡುಗಳು, ನನ್ನ ತಪ್ಪು ತಿಳುವಳಿಕೆಯನ್ನ ತಿದ್ದಿದ್ದವು.
ವಿಶೇಷವಾಗಿ, ಹತ್ತು ವರ್ಷಗಳ ಹಿಂದೆ ಮೊದಲ ಬಾರಿ ಕೇಳಿದಾಗಿನಿಂದ ಇಂದಿಗೂ ನನ್ನ ಅತಿ ಮೆಚ್ಚಿನ ಹಾಡು ಎಂದರೆ, Phil Collinsನ "Another day in Paradise". ಈ ಹಾಡಿನಲ್ಲಿ ನಿಸ್ಸಹಾಯಕ ಹೆಂಗಸೊಬ್ಬಳ ಕೂಗಿಗೆ ಕಿವುಡಾದ ಒಬ್ಬ ದಾರಿಹೋಕ, ಬದುಕಿನಲ್ಲಿ ಎಲ್ಲವೂ ಇದ್ದು ತನ್ನ ಸಣ್ಣ ಸಮಸ್ಯೆಗಳೆನ್ನೆ ದೊಡ್ಡದಾಗಿಸಿಕೊಂಡು ನಿಜವಾದ ನಿಸ್ಸಹಾಯಕರ ನೆರವಿಗೆ ಕೈ ಚಾಚಲು ಸಮಯವಿಲ್ಲದ ನಮ್ಮಂತವರ self centered mentalityಗೆ, lack of compassionಗೆ ಸಾಕ್ಷಿಯಾಗುತ್ತಾನೆ. ತನ್ನ ಅಂತಃಕರಣವನ್ನೆಲ್ಲೋ ಬಚ್ಚಿಟ್ಟು ಮೂಳೆ ಮಾಂಸಗಳ ಮೂಟೆ ಹೊತ್ತು ನಡೆದಾಡುವ ನಿಷ್ಕಾರುಣ ಪ್ರಾಣಿಯಾಗಿ ಅಸಹ್ಯ ತರಿಸುತ್ತಾನೆ. ಆದರೆ ಕೊನೆಗೆ ಅಯ್ಯೊ, ನಾನೂ ಒಂದು ದಿನ ಹೀಗೆ ಮಾಡಿದ್ದೆನಲ್ಲೆವೆ ಎಂದೆನಿಸಿ ನಮ್ಮ ಪ್ರತಿಬಿಂಬದಂತೆ ಮುಂದೆ ನಿಂತು ನಾಚಿಕೆ ಹುಟ್ಟಿಸುತ್ತಾನೆ. ಇದು ನನ್ನ ಅನಿಸಿಕೆ, ನಾ ಮಾಡಿಕೊಂಡ ಅರ್ಥದ ಪ್ರವರ. ನಿಮಗೆ ಈ ಹಾಡು ಬೇರೆಯದೇ ರೀತಿಯಲ್ಲಿ ಅರ್ಥವಾಗಿರಲೂ ಬಹುದು.
ನನಗೆ ಅರ್ಥವಾದ ಮಟ್ಟಿಗೆ ಈ ಹಾಡಿನ ಅನುವಾದಕ್ಕೆ ಯತ್ನ ಮಾಡಿದ್ದೀನಿ. ಇದರ ಆಶಯವಿಷ್ಟೆ: ತಿರುಗಿಯೂ ನೋಡದೆ ಮುಂದೆ ಹೋದ ದಾರಿಹೋಕನದ್ದೆ ಕತೆ ನಿಮ್ಮದೂ ಇರಬಹುದು, ನನ್ನದೂ ಇರಬಹುದು. ನಮ್ಮದೇನೆ ಸಮಸ್ಯೆ, ಕಷ್ಟವಿರಲಿ - ಬೇರೊಬ್ಬರ ನೋವಿಗೆ ಸ್ಪಂದಿಸುವಷ್ಟು ಸಮಯ, ಕನಿಕರ ನಮಗೆ ಇರಲಿ.
Link to the song: http://www.youtube.com/watch?v=Qt2mbGP6vFI
ಕೂಗಿ ಕರೆದಳು ಅವಳು ದಾರಿಹೋಕನೊಬ್ಬನ
ಸ್ವಾಮಿ, ನೆರವು ಬೇಕಿದೆ, ನಿಲ್ಲಿ.
ಕೊರೆವ ಚಳಿ ಇಲ್ಲಿ, ಇರಲು ಆಶ್ರಯವಿಲ್ಲ
ತಂಗಲೊಂದಿದೆಯೆ ಜಾಗ ದಯಮಾಡಿ ಹೇಳಿ.
ಅವ ನಡೆದ ಮುಂದೆ, ತಿರುಗಿಯೂ ನೋಡದೆ
ನಟಿಸಿ ಅವಳ ಕರೆ ತನಗೆ ಕೇಳದಿದ್ದ ಹಾಗೆ.
ಸಾಗಿದ ಸೀಟಿ ಊದುತ್ತ ರಸ್ತೆ ದಾಟಲು
ಮುಜುಗರವಾಗಿತ್ತವನಿಗೆ ಅವಳ ಬಳಿ ನಿಲ್ಲಲು.
ಮತ್ತೊಮ್ಮೆ ಯೋಚಿಸಿ!
ಸ್ವರ್ಗದೊಳಗಿದು ಮತ್ತೊಂದು ದಿನ ನಿಮಗೂ ನನಗೂ.
ಮತ್ತೊಂದು ದಿನ ಈ ಸ್ವರ್ಗದೊಳಗೆ.
ಕೂಗಿ ಕರೆದಳು ಅವಳು ದಾರಿಹೋಕನೊಬ್ಬನ
ಅತ್ತು ಬಾಡಿದ ಅವಳ ಮುಖ ಅವನಿಗೆ ಕಂಡಿತ್ತು.
ಆವಳ ಪಾದಗಳಲ್ಲಿ ಬಿಸಿಯ ಗುಳ್ಳೆಗಳೆದ್ದು
ನಡೆಯಲಾಗದೆ ಹೋದರೂ ಪ್ರಯತ್ನ ಸಾಗಿತ್ತು.
ಮತ್ತೊಮ್ಮೆ ಯೋಚಿಸಿ!
ಓ ದೇವರೇ, ಯಾರಿಂದಲೂ ಏನೂ ಮಾಡಲಾಗದೇ?
ಓ ದೇವರೇ, ನೀನೇನು ಹೇಳುವೆ?
ಅವಳ ಮುಖದ ಮೇಲಿನ ಗೆರೆಗಳು ಹೇಳಿವೆ
ಅವಳು ನಡೆದ ದಾರಿ ಸುಲಭದ್ದಿರಲಿಲ್ಲ
ಎಷ್ಟೊ ಜಾಗಗಳಿಂದ ಹೊರಗೆ ತಳ್ಳಲ್ಪಟ್ಟವಳು
ನತದೃಷ್ಟೆ ಇವಳು ಎಲ್ಲು ಸಲ್ಲಲೇ ಇಲ್ಲ.