Here is a kannada translation of the song 'Maa' from the movie "taare zameen par". Its an amazingly heart touching song and very close to my heart. I always wanted to try translating hindi songs to kannada and what better song could i have chosen than this to start with. Apologies to Prasoon Joshi for any mistakes in the translation.
A Link to original Hindi lyrics:
http://www.glamsham.com/music/lyrics/taare-zameen-par/maa/818/1471.htm
ಯಾವತ್ತು ನಿನ್ನಲ್ಲಿ ಹೇಳಿಕೊಂಡಿಲ್ಲ
ಕತ್ತಲೆಂದರೆ ನಾನು ಹೆದರುವೆನು ಅಮ್ಮ.
ಸುಮ್ಮನೇ ಹಾಗೆ ತೋರಿಕೊಂಡಿಲ್ಲ
ನೀನೆಂದರೆ ಬಹಳ ಒಲವು ನನಗಮ್ಮ.
ನಾ ಹೇಳದಿದ್ದರೂ ನಿನಗೆಲ್ಲ ಗೊತ್ತು,
ನಿನಗೆಲ್ಲ ಗೊತ್ತು. ಅಲ್ಲವೇನಮ್ಮ?
ಸಂತೆಯೊಳು ಹೀಗೆ ಬಿಟ್ಟು ಹೋಗದಿರು
ಮನೆಗೊಬ್ಬನೇ ಮರಳಿ ಬರಲಾರೆನಮ್ಮ
ನಿನ್ನಿಂದ ಬಲುದೂರ ನನ್ನ ಕಳಿಸದಿರು
ನಿನ್ನ ನೆನಪಿಗು ನಾನು ಬರದಂತೆ ಅಮ್ಮ.
ನಾನೇನು ಅಷ್ಟೊಂದು ಕೆಟ್ಟವನೆ ಅಮ್ಮ?
ಅಷ್ಟೊಂದು ಕೆಟ್ಟವನೆ ಹೇಳೆ ನನ್ನಮ್ಮ.
ಉಯ್ಯಾಲೆಯಲ್ಲಿರಿಸಿ ಅಪ್ಪ ನನ್ನನ್ನು
ತೂಗಿದರೆ ಜೋರಾಗಿ ಕೇಳೆ ಅಮ್ಮ,
ನನ್ನ ಕಂಗಳವು ನಿನ್ನನ್ನೆ ಹುಡುಕುವವು
ನೀ ಬಂದು ನನ ಹಿಡಿವೆ ಎನುವಾಸೆ ಅಮ್ಮ.
ಅಪ್ಪನಲಿ ಹೇಳೆನು ಆದರೂ ನಾನು
ಬೆಚ್ಚುವೆನು, ಬೆಚ್ಚಿ ನಡುಗುವೆನು ಅಮ್ಮ.
ಮುಖದಲ್ಲಿ ತೋರೆನು ಆದರೂ ನಾನು
ಹೆದರುವೆನು, ಒಳಗೊಳಗೆ ಬೆದರುವೆನು ಅಮ್ಮ.
ನಾ ಹೇಳದಿದ್ದರೂ ನಿನಗೆಲ್ಲ ಗೊತ್ತು,
ನಿನಗೆಲ್ಲ ಗೊತ್ತು. ಅಲ್ಲವೇನಮ್ಮ?
A Link to original Hindi lyrics:
http://www.glamsham.com/music/lyrics/taare-zameen-par/maa/818/1471.htm
ಯಾವತ್ತು ನಿನ್ನಲ್ಲಿ ಹೇಳಿಕೊಂಡಿಲ್ಲ
ಕತ್ತಲೆಂದರೆ ನಾನು ಹೆದರುವೆನು ಅಮ್ಮ.
ಸುಮ್ಮನೇ ಹಾಗೆ ತೋರಿಕೊಂಡಿಲ್ಲ
ನೀನೆಂದರೆ ಬಹಳ ಒಲವು ನನಗಮ್ಮ.
ನಾ ಹೇಳದಿದ್ದರೂ ನಿನಗೆಲ್ಲ ಗೊತ್ತು,
ನಿನಗೆಲ್ಲ ಗೊತ್ತು. ಅಲ್ಲವೇನಮ್ಮ?
ಸಂತೆಯೊಳು ಹೀಗೆ ಬಿಟ್ಟು ಹೋಗದಿರು
ಮನೆಗೊಬ್ಬನೇ ಮರಳಿ ಬರಲಾರೆನಮ್ಮ
ನಿನ್ನಿಂದ ಬಲುದೂರ ನನ್ನ ಕಳಿಸದಿರು
ನಿನ್ನ ನೆನಪಿಗು ನಾನು ಬರದಂತೆ ಅಮ್ಮ.
ನಾನೇನು ಅಷ್ಟೊಂದು ಕೆಟ್ಟವನೆ ಅಮ್ಮ?
ಅಷ್ಟೊಂದು ಕೆಟ್ಟವನೆ ಹೇಳೆ ನನ್ನಮ್ಮ.
ಉಯ್ಯಾಲೆಯಲ್ಲಿರಿಸಿ ಅಪ್ಪ ನನ್ನನ್ನು
ತೂಗಿದರೆ ಜೋರಾಗಿ ಕೇಳೆ ಅಮ್ಮ,
ನನ್ನ ಕಂಗಳವು ನಿನ್ನನ್ನೆ ಹುಡುಕುವವು
ನೀ ಬಂದು ನನ ಹಿಡಿವೆ ಎನುವಾಸೆ ಅಮ್ಮ.
ಅಪ್ಪನಲಿ ಹೇಳೆನು ಆದರೂ ನಾನು
ಬೆಚ್ಚುವೆನು, ಬೆಚ್ಚಿ ನಡುಗುವೆನು ಅಮ್ಮ.
ಮುಖದಲ್ಲಿ ತೋರೆನು ಆದರೂ ನಾನು
ಹೆದರುವೆನು, ಒಳಗೊಳಗೆ ಬೆದರುವೆನು ಅಮ್ಮ.
ನಾ ಹೇಳದಿದ್ದರೂ ನಿನಗೆಲ್ಲ ಗೊತ್ತು,
ನಿನಗೆಲ್ಲ ಗೊತ್ತು. ಅಲ್ಲವೇನಮ್ಮ?