Saturday, March 16, 2013

ಅವಳಿರೆ ಸಾಕು


ಅವಳೆದೆಗೂಡಿನ  ಚಿಲಿಪಿಲಿ  ಹಾಡು
ನನ್ನಾಂತರ್ಯದ   ಕಿವಿಗಳಿಗೆ
ಸಾಯೋ  ಜೀವಕೆ  ಅಮೃತದಂತೆ
ಬೇಸಗೆ  ಮಳೆಯಂತೆ  ಇಳೆಗೆ.

ಬಿಗಿಯಪ್ಪುಗೆ  ಜೊತೆ  ಬಿಸಿಯುಸಿರಿದ್ದರೆ
ಕಂಬಳಿ  ಏತಕೆ   ಚಳಿಗೆ?
ಜೊತೆ  ಅವಳಿದ್ದರೆನಗುನಗುತಿದ್ದರೆ
ಬಾಳಲಿ  ನಿತ್ಯವು  ದೀವಳಿಗೆ.